"ಆಮಿಶ್"

ಇಂತದ್ರಲ್ಲಿ ವಿದ್ಯುತ್,ಟಿವಿ,ಕಾರು ... ತಮ್ಮ ಕೈಗೆಟುಕುವಂತಿದ್ದರೂ ಅವನ್ನು ಜೀವನವಿಡೀ ಉಪಯೋಗಿಸದೇ ಇರುವ ಜನರೂ ಅಮೆರಿಕ,ಕೆನಡಾದಂಥಹ ಮುಂದುವರಿದ ದೇಶಗಳಲ್ಲಿ ಇದ್ದಾರೆ ಅಂದ್ರೆ ಮಹದಾಶ್ಚರ್ಯವೆನಿಸಬಹುದಲ್ವೇ?
ಹೌದು, "ಆಮಿಶ್(Amish)" ಅನ್ನುವ ಧಾರ್ಮಿಕ ಪಂಗಡದ ಜನರು ಇನ್ನೂ ೧೮ನೇ ಶತಮಾನದಂಚಿನ ಕಾಲದಿಂದ ಹೊರಗೆ ಬಂದಿಲ್ಲ. "ಸಹಜೀವನವೇ ಮಾನವ ಧರ್ಮ" ಎನ್ನುವುದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಈ ಜನಾಂಗ ಮಾಯಾ ಜಗತ್ತಿನ ಥಳಕಿನಿಂದ ಸಾವಿರಾರು ಯೋಜನ ದೂರವಿದ್ದಾರೆ.
ಆಮಿಶ್ ಸಂಸ್ಕೃತಿಯಲ್ಲಿ ಮುಖ್ಯವಾಗಿ ಗಮನಕ್ಕೆ ಬರುವ ಸಂಗತಿಯೆಂದರೆ ಒಗ್ಗಟ್ಟಿನ ಸಾಂಸಾರಿಕ ಜೀವನ. ಏಳರಿಂದ ಹತ್ತು ಮಕ್ಕಳಿರುವ ದೊಡ್ಡ ಕುಟುಂಬಗಳು ಸರ್ವೇ ಸಾಮಾನ್ಯ.ಗಂಡಸರು ಹೊಲ-ಗದ್ದೆಗಳ ಕೆಲಸ ನಿರ್ವಹಿಸಿದರೆ, ಹೆಂಗಸರು ಅಡುಗೆ,ಬಟ್ಟೆ ತೊಳೆಯುವುದು ಇತ್ಯಾದಿ ಮನೆಗೆಲಸಗಳನ್ನು ಮಾಡುತ್ತಾರೆ. ಜರ್ಮನ್ ಭಾಷೆ ಆಡುಭಾಷೆ ಆಗಿದ್ದರೂ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನೂ ಕಲಿಸಲಾಗುತ್ತದೆ.ಆಮಿಶ್ ಮಕ್ಕಳು ಕಲಿಯುವುದು ಹೆಚ್ಚೆಂದರೆ ೮ನೇ ತರಗತಿಯವರೆಗೆ; ಅದೂ ತಮ್ಮದೇ ಆದ ಪ್ರೈವೇಟ್ ಶಾಲೆಗಳಲ್ಲಿ ಮಾತ್ರ.

ಆಮಿಶ್ ಜನರು ತಮ್ಮದೇ ಪಂಗಡದೊಳಗೆ ಮಾತ್ರ ಮದುವೆ ಮಾಡಿಕೊಳ್ಳುತ್ತಾರೆ. ಅಂತರ್ಜಾತೀಯ ವಿವಾಹ ಅಥವಾ ಡೈವೋರ್ಸ್ಗಳಿಗೆ ಅವಕಾಶವೇ ಇಲ್ಲ!.
-
