ನಿನ್ನೆಯಷ್ಟೇ ಊರಿಂದ ವಾಪಸ್ಸು ಬಂದೆ. ಇಂದು ಅದೇನೋ ಕಳಕ್ಕೊಂಡು ಬಂದಂತೆ ಅನಿಸಿಕೆ.. ಮನದೊಳಗೆ ಅರಿಯದ ಸಂಕಟ. ಜೀವನ ಅಂದ್ರೆ ಹೀಗೇನೇ ಅಲ್ವಾ?. ತನ್ನವರನ್ನು ಬಹಳ ಕಾಲದ ಮೇಲೆ ಭೆಟ್ಟಿ ಮಾಡಿದ್ದು ಅದೆಷ್ಟು ಮನಕ್ಕೆ ಖುಷಿ ಕೊಟ್ಟಿತ್ತು ಅಂತ ಇವತ್ತು ಅರ್ಥ ಆಗ್ತಿದೆ. ಮನೆಯಲ್ಲೇ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ರಿಂದ ಎಲ್ಲಾ ಇಷ್ಟರು,ನೆಂಟರನ್ನೂ ಒಂದೇ ಜಾಗದಲ್ಲಿ ನೋಡುವಂತಾಯ್ತು. ಅಂದದ ಸೀರೆ ಉಟ್ಟು ಕೊರಳು ಕೈ ತುಂಬಾ ಚಿನ್ನಾಭರಣ ತೊಟ್ಟು ಕಾರ್ಯಕ್ರಮವಿಡೀ ಓಡಾಡಿದ್ದು ಒಂದು ಸುಂದರ ನೆನಪಷ್ಟೇ ಈವಾಗ...
ಕೆಲವರನ್ನಂತೂ ಈ ಕಾರ್ಯಕ್ರಮದಲ್ಲೇ ಮೊದಲ ಸಲ ನಾನು ಭೆಟ್ಟಿಯಾಗಿದ್ದು. ಆದರೂ ಎಷ್ಟೋ ವರುಷದ ಪರಿಚಯವೋ ಎಂಬಂತೆ ಅದೇನೋ ಅರಿಯದ ಬಂಧ ಬೆಳೆದಿತ್ತು ಒಂದು ದಿನದ ಒಡನಾಟದಲ್ಲೇ... ಸಂಜೆ ಕಾರ್ಯಕ್ರಮ ಮುಗಿದ ಮೇಲೆ ಅವ್ರನ್ನು ಬೀಳ್ಕೊಡುವಾಗ ಭಾವೋದ್ವೇಗ ಉಕ್ಕಿ ಬಂದಂತೆ ಅನಿಸಿತ್ತು... ಮನಸು ಮೌನವಾಗಿತ್ತು... ಕಣ್ಣಂಚಿನ ಹನಿಗಳು ನೂರು ಮಾತುಗಳನ್ನಾಡಿದ್ದವು.
ಅವರೆಲ್ಲರ ಪ್ರೀತಿ ವಿಶ್ವಾಸಗಳನ್ನು ಮನದಲ್ಲಿ ತುಂಬಿಕೊಂಡು ದೂರದ ದೇಶಕ್ಕೆ ಮತ್ತೆ ಮರಳಿದ್ದೇನೆ... ಮತ್ತೊಮ್ಮೆ ಅವರೆಲ್ಲರ ಭೇಟಿಯಾಗುವ ಭರವಸೆಯ ಹೊತ್ತು... ಇರುವುದೆಲ್ಲವ ಬಿಟ್ಟು ಇಲ್ಲದಿರುವುದರ ಕಡೆಗೆ ನಡೆವುದೇ ಜೀವನ ಅಲ್ವೇ?
- uShai
3 comments:
Hi, You are absolutely right. By the way i have posted some poems based on woman. visit it in your free time.Thanks. Happy posting and Happy woman's day.
link to my blog: http://myblog-gururaj.blogspot.com/
Hi Guru,
Thanks a lot for the feedback. Sure I will visit your blog. Pl do visit again.
-uShai
Namasthe,
Nimma blog bahaLa sundaravaagige...bhavanegaLannu , dina nithyada aaguhogugaLannu , chennagi vyaktha padisuthiruviri...Jeevanada anhubhavavannu, thamma bhaasha proudimeyinda jana samanyarige arthavaguvahaage bareyuvudu olle lekhakige saadhya...baalyada prabhanda, kathe bareva spardhegaLau, haagoo nanna high school na kannada classugalaLli nadesuva charche nenapige banthu..
Shubhavaagali!
-navashri
Post a Comment