Is Story Mein Emotion Hai, Drama Hai, Tragedy Hai
ಸಿನೆಮಾ ಜಗತ್ತಿನ ಆಗುಹೋಗುಗಳ ಬಗ್ಗೆ ನನ್ನಂತೆ ನಿಮಗೂ ಆಸಕ್ತಿ ಇದ್ದಲ್ಲಿ ಈ ವಿಷಯ ನೀವೂ ಗಮನಿಸಿರಬಹುದು. ಯಾವುದೇ ಸಿನೆಮಾ ಬಿಡುಗಡೆ ಆಗುವ ಮೊದಲು ಯಾ ಆದ ಕೂಡಲೇ ಬರುವ ಸಂದರ್ಶನಗಳಲ್ಲಿ ಪತ್ರಕರ್ತರು ನಾಯಕ-ನಾಯಕಿ,ನಿರ್ದೇಶಕ-ನಿರ್ಮಾಪಕರಿಗೆ ಹಾಕುವ ಸಾಮಾನ್ಯ ಸವಾಲು 'ಈ ಸಿನೆಮಾ ಬಗ್ಗೆ ನಿಮ್ಮ ಅಭಿಪ್ರಾಯವೇನು?..' ಅಥವಾ 'ನಿಮ್ಮ ಪಾತ್ರದ ಬಗ್ಗೆ ಹೇಳ್ತೀರಾ?'. ಉದಯ್ನೋನ್ಮುಖ ಕಲಾವಿದನಿರಲಿ ಅಥವಾ ಈಗಾಗಲೇ ಹತ್ತಾರು-ನೂರಾರು ಸಿನೆಮಾಗಳಲ್ಲಿ ನಟಿಸಿರಲಿ, ಏನೂ ಹೆಚ್ಚಿನ ಅಂತರವಿಲ್ಲ ಬಿಡಿ, ಕೊಡುವ ಉತ್ತರ ಒಂದೇ-'ಈ ಚಿತ್ರದಲ್ಲಿ ನನಗೆ ತುಂಬಾ ಭಿನ್ನವಾದ ಪಾತ್ರವಿದೆ....ಹೊಸ ಬಗೆಯ ಕಥೆಯಿದೆ...'ಇತ್ಯಾದಿ ಇತ್ಯಾದಿ. ಅರ್ಥಾತ್ ದಿನನಿತ್ಯ ಬರುವ ದೂರದರ್ಶನದ ಹವಾಮಾನ ವರದಿಗೂ (ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ?!) ಇವರು ಕೊಡುವ ಉತ್ತರಕ್ಕೂ ಬಲು ಹತ್ತಿರದ ಸಾಮ್ಯತೆಯಿದೆ ಎನ್ನಬಹುದು- ಅದೇ ರಾಗ ಅದೇ ಹಾಡು. ಪ್ರಶ್ನೆಗೆ ಮತ್ತದೇ ಉತ್ತರ ಹಲವು ಬಗೆಯಲ್ಲಿ ನಾಯಕ-ನಾಯಕಿಯರು ತಂತಮ್ಮ ಶೈಲಿಯಲ್ಲಿ ವಿವರಿಸಿದರೂ, ಶ್ರೀ ಸಾಮಾನ್ಯ ರೀತಿಯಲ್ಲಿ ಒಂದೇ ವಾಕ್ಯದಲ್ಲಿ ಹೀಗೆ ಹೇಳಬಹುದಲ್ವಾ ? -'ಇಸ್ ಸ್ಟೋರಿ ಮೆ ಇಮೋಶನ್ ಹೆ, ಡ್ರಾಮಾ ಹೆ, ಟ್ರಾಜೆಡಿ ಹೆ'! ನೀವೇನಂತೀರಾ?
-
2 comments:
ನಿಮ್ಮ ಈ ಮಾತು ತುಂಬ ನಿಜ! ಆದರೆ ನಾವು ಆ ನಟ ನಟಿಯರನ್ನು ದೋಷಿಸಿ ಪ್ರಯೋಜನವಿಲ್ಲ ಬಿಡಿ. ಪಾಪ ಅವರು ಮಾಡುತ್ತಿರುವುದು ಹೇಳುತ್ತಿರುವುದು ಯಾರೋ ಹೇಳಿಕೊಟ್ಟ ಮಾತುಗಳನ್ನ ಅಲ್ಲವೆ? ಹೀಗಾಗಿ ನಾವು ಕೇಳುತ್ತಿರುವವರೆಗು ಅವರು ಅದೆ ರಾಗ ಅದೆ ಹಾಡು ಅಂತ ಹೇಳುತ್ತಾನೆ ಇರುತ್ತಾರೆ.
ನಿಮ್ಮ ಬ್ಲಾಗ್ ಬಹಳ ಚೆನ್ನಾಗಿದೆ. ಹೀಗೆ ಬರಿಯುತ್ತಿರಿ.
ShaKri
http://nannaputtakaanike.blogspot.com/
Post a Comment